ಮರಾಠ ವಿದ್ಯಾ ಪ್ರಸಾರಕ ಮಂಡಳ

   ಮರಾಠಾ ವಿದ್ಯಾ ಪ್ರಸಾರಕ ಮಂಡಳ ನಡೆದು ಬಂದ ದಾರಿ

ಮರಾಠಾ ವಿದ್ಯಾ ಪ್ರಸಾರಕ ಮಂಡಳ ನಡೆದು ಬಂದ ದಾರಿ ಅಮೋಘವಾದುದು. ಮೆಲಕು ಹಾಕಿ ನೋಡಿದಾಗ ಹಾದಿಯಲಿ ಇಣುಕಿದಾಗ ಸಿಗುವುದು ಕೊಡುಗೆಗಳು ಹಿರಿಯರದು.

ಭಾರತದ ಪ್ರಾಚೀನ ಧರ್ಮಗಳಲ್ಲಿ ಮರಾಠಾ ಎಂಬ ಪದವು ಸಹ ತನ್ನದೇ ಆದ ಸ್ಥಾನಮಾನ ಪಡೆದಿದೆ. ಆದರೆ ಮರಾಠಾ ಧರ್ಮದ ಭವ್ಯ ಬೆಳವಣಿಗೆ ಆದದ್ದು ಶಿವಾಜಿ ಮಹಾರಾಜರ ಕಾಲಾವಧಿಯಲ್ಲಿ, ಶಿವಾಜಿಯ ಧೈರ್ಯ, ಧೈರ್ಯ ಅಮೋಘವಾದದ್ದು. ಶಿವಾಜಿ ಮುಗಿಲೆತ್ತರಕ್ಕೆ ಬೆಳವಣಿಗೆ ಹೊಂದಲು ಮೂಲ ಕಾರಣ ತಾಯಿ ಜೀಜಾಮಾತಾ, ಗುರು ರಾಮದಾಸ ಹಾಗೂ ದಾದಾಜಿಕೊಂಡದೇವ ಅವರ ಮಾರ್ಗದರ್ಶನ ಎಂದರೆ ತಪ್ಪಾಗಲಾರದು, ಯುದ್ಧ, ಸ್ವದೇಶ ಪ್ರೇಮ, ಕರಕುಶಲತೆ, ಶಿಕ್ಷಣ, ಸಂಸ್ಕೃತಿ, ಕಲೆ ಹಾಗೂ ಸಾಂಗತ್ಯದಲ್ಲಿ ವಿಶ್ವದ ಇತಿಹಾಸದಲ್ಲಿ ಮಹತ್ವಪೂರ್ಣ ಸ್ಥಾನಮಾನ ಪಡೆದಿದೆ.

ಶಿವಾಜಿ ನಂತರದ ದಿನಮಾನಗಳಲ್ಲಿಯೂ ಸಹ ಮರಾಠರು ಎಲ್ಲ ವರ್ಗದ ಜನರಿಗೆ ವಿದ್ಯಾದಾನವನ್ನು ಮಾಡುವ ಕಳಕಳಿಯನ್ನು ಹೊಂದಿದ್ದರು, ಈ ನಿಟ್ಟಿನಲ್ಲಿ 1893ರಲ್ಲಿ ಮ.ವಿ.ಪ್ರ. ಮಂಡಳವು ಪ್ರಾರಂಭಗೊಂಡಿತು. ಧಾರವಾಡದಲ್ಲಿ ಅಂದಿನ ಹಿರಿಯರಾದ ಶ್ರೀಮಾನ ಅಪ್ಪಾಸಾಹೇಬ ಘೋರ್ಪಡೆ, ಗಜೇಂದ್ರಗಡಕರ, ತಾತ್ಯಾರಾವ್‌ ಪಾಂಡುರಂಗ, ಸಾವಂತ ಭೀಮರಾದ, ಜೀವಾಜಿ ಮೋಹಿತೆ, ಕೇದಾರಬಾ ಚಿಮಣಾಜಿ ಶಿಂಧೆ, ದೊಂಡಿಬಾ, ಆನಂದರಾವ್‌ ಬೋಸ್, ಗಣಪತರಾವ್‌, ರಾಮಜಿ ಮಾನೆ, ಅಮೃತರಾವ್ ಹೇಳ್ಳೆ ಮುಂತಾದವರು ಶಿಕ್ಷಣವನ್ನು ನೀಡುವ ಉದ್ದೇಶದಿಂದ ಕ್ರಿಶ 1894ರಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು.

ಈ ಶಾಲೆಯನ್ನು ಸರ್ಕಾರದಿಂದ ನೋಂದಣಿ ಮಾಡಿಸಿ ಮನ್ನಣೆಯನ್ನು ಸಹ ಪಡೆಯಲಾಗಿದೆ. ಈ ಶಾಲೆಯನ್ನು ಅಭಿವೃದ್ಧಿಪಡಿಸಲು ಮಂಡಳದ ಗಣ್ಯರು ಧಾರವಾಡ ಅಲ್ಲದೇ ಸುತ್ತಮುತ್ತ ಹಳ್ಳಿಗಳಿಂದಲೂ ದೇಣಿಗೆ ಪಡೆದು ವಿದ್ಯಾರ್ಥಿಗಳಿಗೆ ಊಟ ಮತ್ತು ಧನ ಸಹಾಯ ಒದಗಿಸಿದ್ದಾರೆ. ಅದೇ ವೇಳೆಗೆ ಪ್ಲೇಗ ಕಾಯಿಲೆ ಬಂದು ವಿದ್ಯಾ ಪ್ರಸಾರಕ ಕಾರ್ಯಕ್ಕೆ ಅಡ್ಡಿ ಆತಂಕಗಳು ಒದಗಿ ಬಂದು ಕಾರ್ಯಗಳು ಕುಂಠಿತಗೊಂಡವು.

ಕ್ರಿ.ಶ. 1919ರಲ್ಲಿ ಮರಾಠಾ ವಿದ್ಯಾ ಪ್ರಸಾರಕ ಮಂಡಳವು ವಸತಿ ನಿಲಯ ಆರಂಭಿಸಿತು. ಪರ ಊರಿನ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಸಹಾಯವಾಯಿತು. ಈ ವಸತಿಗೆ “ಶ್ರೀ ಛತ್ರಪತಿ ಶಾಹೂ ಮಹಾರಾಜ ಮರಾಠಾ ಬೋರ್ಡಿಂಗ್” ಎಂದು ನಾಮಕರಣ ಮಾಡಲಾಯಿತು. ಈ ವಸತಿ ನಿಲಯಕ್ಕೆ ವಿದ್ಯಾ ಪ್ರೇಮಿ ಶ್ರೀ ಛತ್ರಪತಿ ಶಾಹೂ ಮಹಾರಾಜ, ಕೊಲ್ಲಾಪುರ ಧನ ಸಹಾಯ ಮಾಡಿದ್ದರು. ಈ ಬೋರ್ಡಿಂಗ್‌ನಲ್ಲಿ ಅನೇಕರು ವಿದ್ಯಾಭ್ಯಾಸ ಮಾಡಿ ಇಂದು ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೂರ್ವಜರ ಕನಸನ್ನು ನನಸು ಮಾಡಿದ್ದಾರೆ. ಬಡೋದಯ ಶ್ರೀಮಂತ ಮಹಾರಾಜರು ಈ ಬೋರ್ಡಿಂಗಿಗೆ ಧನ ಸಹಾಯ ಮಾಡಿದ್ದಾರೆ.

ಕ್ರಿ.ಶ. 1902-1911ರ ವರೆಗೆ ಅಧ್ಯಕ್ಷರಾಗಿದ್ದ ಶ್ರೀ ಗಣಪತರಾವ್ ರಾಮಜಿ ಮಾನೆ, ವೈ. ಪ್ರೆಸಿಡೆಂಟ್ ತಾತ್ಯಾರಾವ್ ಪಾಂಡುರಂಗ್ ಸಾವಂತ ಮುಂತಾದವರು ಸಾಕಷ್ಟು ಉದ್ದಿಮೆದಾರರನ್ನು ಮತ್ತು ಉದ್ಯೋಗಿಗಳನ್ನು ಓಲೈಸಿ ಅವರಿಂದ ಧನಸಹಾಯ ಪಡೆದರು. ಆ ಕಾಲದಲ್ಲಿ 7 ಜನ ಇಂಗ್ಲೀಷ್ ಮತ್ತು 13 ಜನ ಕನ್ನಡ ಕಲಿಯುತ್ತಿದ್ದರು. ಅವರ ಮನೆ ಮನೆಗೂ ಹೋಗಿ ಕಲಿಕೆಯ ಮಹತ್ವ ಮತ್ತು ಅವಶ್ಯಕತೆಯನ್ನು ಜನರ ಮನಸ್ಸಿನ ಮೇಲೆ ಬಿಂಬಿಸಿದರು. ಕ್ರಿಶ. 1912-13ರಲ್ಲಿ ಅಧ್ಯಕ್ಷರಾದ ಶ್ರೀಮಾನ ಅಪ್ಪಾಸಾಹೇಬ ಭುಜಂಗರಾವ್ ಘೋರ್ಪಡೆ ಇವರು ಡೆಕ್ಕನ್‌ ಅಸೋಸಿಯೇಶನ್ ಮಣೆ ಮರಾಠಾ ಶಿಕ್ಷಣ ಪರಿಷತ್ತಿನ ಮತ್ತು ಸಾಂಸ್ಥಿಕ ಧನಿಕರಿಂದ ಸಹಾಯ ಪಡೆದು ಶಿಷ್ಯವೇತನ ಕೊಡಲು ನಿರ್ಧರಿಸಿದರು. ಇಷ್ಟೇ ಅಲ್ಲದೆ ಧರ್ಮಾರ್ಥ ವಾಚನಾಲಯವನ್ನು ಮರಾಠಾ ವಿದ್ಯಾ ಪ್ರಸಾರಕ ಮಂಡಳ ಪ್ರಾರಂಭಿಸಿತು ಹಾಗೂ 1925ರಲ್ಲಿ ವಸತಿ ಗೃಹವನ್ನು ಅನಾವರಣ ಮಾಡಿತು.

ಕ್ರಿ.ಶ. 1962-63ರ ಅವಧಿಯಲ್ಲಿ ಅಂದಿನ ರಾಷ್ಟ್ರಪತಿಗಳಾದ ಡಾ|| ಸರ್ವಪಲ್ಲಿ ರಾಧಾಕೃಷ್ಣನ್‌ರವರು ಮಂಡಳಕ್ಕೆ ಭೇಟಿ ನೀಡಿ ಮಂಡಳದ ಕಾರ್ಯಕಲಾಪಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಮಹತ್ವದ ವಿಷಯವಾಗಿದೆ. ಮುಂದೆ 1972ರಲ್ಲಿ ಮಹಾರಾಷ್ಟ್ರದ ಗಡಿ ಸಮಸ್ಯೆ ಸಂದರ್ಭದಲ್ಲಿ ಮಂಡಳದ ಸಭಾ ಭವನವನ್ನು ಸುಟ್ಟು ಹಾಕಲಾಯಿತು. ಸುಟ್ಟು ಹೋದ ಕಟ್ಟಡದ ಜಾಗದಲ್ಲಿ ಕನ್ನಡ ಕಲಿ ಶ್ರೀರಾಮ ಜಾಧವ ಅವರ ಮುಖಂಡತ್ವದಲ್ಲಿ ಸಭಾಭವನ ನಿರ್ಮಾಣವಾಯಿತು. ಈ ಕಟ್ಟಡ ನಿರ್ಮಾಣದಲ್ಲಿ ಶ್ರೀ ಶಂಕರರಾವ್ ಭೋಸಲೆ, ಶ್ರೀ ರಾಮಚಂದ್ರರಾವ್ ಜಾಧವ, ಶ್ರೀ ಎಚ್. ಆರ್. ಖೈರೆ, ಶ್ರೀ ನರಸಿಂಗರಾವ್‌ ಬಿಜೆ ಮುಂತಾದವರ ಸೇವೆ ಸ್ಮರಣೀಯ, ನಂತರ ಶ್ರೀ ಎಲ್. ಡಿ. ಭೋಸಲೆಯವರ ಮುಖಂಡತ್ವದಲ್ಲಿ ಸುಸಜ್ಜಿತವಾದ 11 ಕೊಠಡಿಗಳನ್ನು ಕಟ್ಟಲಾಯಿತು. ಜೊತೆಗೆ ಬಡ ಮರಾಠಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಶಾಲಾ ಫೀ, ಶಾಲಾ ಸಮವಸ್ತ್ರ, ಉಚಿತ ಸಾಮೂಹಿಕ ಮದುವೆ ಮುಂತಾದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಯಿತು.

2011 ಶ್ರೀ ಎಂ. ಎನ್, ಮೋರೆಯವರ ಅಧಿಕಾರಾವಧಿಯಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ 2013 ರಲ್ಲಿ ಪದವಿ ಮಹಾವಿದ್ಯಾಲಯವನ್ನು ಆರಂಭಿಸಿದರು. ಭಾರತ ಪ್ರೌಢಶಾಲೆಯ ಮೊದಲ ಅಂತಸ್ತಿನ ನೂತನ ಕಟ್ಟಡ ನಿರ್ಮಾಣ ಕಾರ್ಯವನ್ನು ಆರಂಭಿಸಿದ ಕೀರ್ತಿ ಅಧ್ಯಕ್ಷರಾದ ಶ್ರೀ ಎಂ. ಎನ್. ಮೋರೆ ಹಾಗೂ ಪದಾಧಿಕಾರಿಗಳಿಗೆ ಸಲ್ಲುತ್ತದೆ.

ಮಾನ್ಯ ಶ್ರೀ ಮಂಜುನಾಥ ಲವಪ್ಪ ಕದಂ ಅವರ ಮುಖಂಡತ್ವದಲ್ಲಿ ಜನೇವರಿ 2016ರಲ್ಲಿ ಆಯ್ಕೆಯಾದ 15 ಜನ ನಿರ್ದೇಶಕ ಮಂಡಳಿಯು ಕುಡಿಯುವ ನೀರಿನ ವ್ಯವಸ್ಥೆ, ಪ್ರೌಢಶಾಲೆಯ ಮೊದಲ ಅಂತಸ್ತಿನ ಕಟ್ಟಡ, ಶಾಲಾ ಉದ್ಯಾನವನ, ಪೀಠೋಪಕರಣಗಳ ನವೀಕರಣ, ವ್ಯವಸ್ಥಿತವಾದ ಪ್ರಾಚಾರ್ಯರ ಕೊಠಡಿ ಹಾಗೂ ಶಾಲಾ ಕಛೇರಿ, ಶ್ರೀ ಮಾತಾ ತುಳಜಾಭವಾನಿ ದೇವಸ್ಥಾನದ ಪ್ರವೇಶ ದ್ವಾರ, ಇಂಗ್ಲೀಷ್ ಮಾಧ್ಯಮ ಶಾಲೆ ಪ್ರಾರಂಭ, ವಸತಿ ನಿಲಯ ನವೀಕರಣ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು.

ಸಾವಿರ ದಿನ ಅಧ್ಯಯನದಲ್ಲಿ ತೊಡಗಿರುವುದಕ್ಕಿಂತ ಒಂದು ದಿನ ಒಳ್ಳೆಯ ಗುರುವಿನ ಜೊತೆಯಿದ್ದರೆ ಸಾಕು

"Time itself changes for those determined to constantly work towards their goal even in the worst of times." - Chhatrapati Shivaji Maharaj