ಮರಾಠಾ ವಿದ್ಯಾ ಪ್ರಸಾರಕ ಮಂಡಳ ಅಧ್ಯಕ್ಷರ ನುಡಿ

Shri. Manohar S More

President

ಇತಿಹಾಸ ಕಾಲದಲ್ಲಿ ಹಿಂದೂ ಸಾಮ್ರಾಜ್ಯ ಅವನತಿಯ ಹಂತದಲ್ಲಿ ಇದ್ದಾಗ ಅದನ್ನು ಉಳಿಸಿ ಬೆಳೆಸುವಂತಹ ಕಾರ್ಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ ಪ್ರಮುಖವಾಗಿತ್ತು. ಅಂತಹ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಿಂದ ಪ್ರಾರಂಭವಾದ ಈ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ಕೊಡುವಲ್ಲಿ ತನ್ನದೇ ಆದ ಪಾತ್ರವನ್ನು ಬಿಂಬಿಸುತ್ತಿದೆ ಎಂದರೆ ತಪ್ಪಾಗಲಾರದು. ಸಾಂಸ್ಕೃತಿಕ ರಾಜಧಾನಿ ವಿದ್ಯಾನಗರಿ ಎಂದೇ ಖ್ಯಾತಿವೆತ್ತ ಧಾರವಾಡಕ್ಕೆ ಗರಿಯಂತಿರುವ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯು 1893ರಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯು 130 ವರ್ಷವನ್ನು ಸಂಭ್ರಮದಿಂದ ಪೂರೈಸಿದೆ. 2013 ರಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ & ವಾಣಿಜ್ಯ ಪದವಿ ಮಹಾವಿದ್ಯಾಲಯವನ್ನು ಶ್ರೀ ಎಮ್.ಎನ್. ಮೋರೆ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಸಂಸ್ಥೆ ಮೂಲ ಉದ್ದೇಶ ಬಡವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವದಾಗಿತ್ತು. ಅಂದಿನಿಂದ ಇಂದಿನವರೆಗೆ ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೆ ಶಿಕ್ಷಣವನ್ನು ನೀಡುವದರಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದೆ. ಜ್ಞಾನದೇಗುಲದಲ್ಲಿ ವಿದ್ಯಾರ್ಥಿ ಮಿತ್ರರಿಗೆ ವೈಜ್ಞಾನಿಕತೆಯ ಅರಿವು ಮೂಡಿಸಿ. ಜೀವನ ಪಥದಲ್ಲಿ ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ಸುಜ್ಞಾನ. ಸುಜ್ಞಾನದಿಂದ ಸನ್ನಡತೆಗೆ ಹಚ್ಚುವ ಕಾಯಕ ಶ್ರೀಯುತರದಾಗಿದೆ. ಅನೇಕ ವಿದ್ಯಾರ್ಥಿಗಳು ಜ್ಞಾನ ದೇಗುಲದಲ್ಲಿ ತಮ್ಮ ಜೀವನದ ಗುರಿಯೊಂದಿಗೆ ಸಾಧನೆಯ ಹಾದಿಯಲ್ಲಿ ಜಯಗಳಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯ. ವಿದ್ಯಾಕಾಶಿ ಧಾರವಾಡದಲ್ಲಿ ಪದವಿ ಹಂತದ ಶಿಕ್ಷಣ ಪಡೆಯುವದು ತುಂಬಾ ವೆಚ್ಚದಾಯಕವಾಗಿದ್ದು, ಆದರೆ ನಮ್ಮ ಸಂಸ್ಥೆ ಉಳಿದ ವಿದ್ಯಾಸಂಸ್ಥೆಗಳಿಗಿಂತ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ಮರಾಠಾ ವಿದ್ಯಾಪ್ರಸಾರಕ ಮಂಡಳವು ಒದಗಿಸುತ್ತಿದೆ. 2013ರಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ& ವಾಣಿಕ್ಯ ಪದವಿ ಮಹಾವಿದ್ಯಾಲಯವನ್ನು ಶ್ರೀ ಎಮ್. ಎನ್. ಮೋರೆ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಜ್ಞಾನದ ವಿಕಾಸಕ್ಕೆ ಉತ್ತಮವಾದ ಶಿಕ್ಷಣ ಸಂಸ್ಥೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಧಾರವಾಡದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳರಿ ಎಂದು ಆಶಿಸುತ್ತೇನೆ.

Our Management

Image

Yallappa B
Chavhan

Vice President
Image

Subhas Y
Shindhe

Chairman
Image

Raju T
Birajenavar

Secretary
Image

Malleshappa
Shindhe

Vice Secretary
Image

Ishwar B
Patil

Director

Image

Shivaji S
Suryavanshi

Director
Image

Subhash D
Pawar

Director
Image

Dattatreya
C.Mote

Director
Image

Anil D
Bhosle

Director
Image

Mahesh A
Shindhe

Director

Image

Purushottam
N Jadhav

Director
Image

Raju J
Kale

Director
Image

Sunil P
More

Director
Image

Prasad S
Hangalaki

Director

Classes & Libraries



We Are The Best Choice For All Students

Watch Our Video

Testimoinials

What People Say

Call To Enroll



"Time itself changes for those determined to constantly work towards their goal even in the worst of times." - Chhatrapati Shivaji Maharaj